Wednesday, January 14, 2015

ಗ್ರೀಕ್ ದೇವರುಗಳು ಮತ್ತು ರಾಜಕಾರಣ - 3



ಜಗತ್ತಿನ ಅಪೂರ್ವ ಸುಂದರಿಯಾದ ಹೆಲೆನ್ ದೇವತೆಗಳ ರಾಜನಾದ ಜ್ಯೂಸ್ ಮತ್ತು ಲಿಡಾರ ಸಂಗಮದಿಂದ ಜನಿಸಿದ ಪುತ್ರಿ ಹೆಲೆನ್. ಅವಳ ಜನನ ವೃತ್ತಾಂತ ಕೌತುಕವಾಗಿದೆ! ಜ್ಯೂಸನು ಹಂಸದ ರೂಪದಲ್ಲಿದ್ದಾಗ ಒಂದು ಹದ್ದು ಹಂಸವನ್ನು ಅಟ್ಟಿಸಿಕೊಂಡು ಬರುವಾಗ ಹಂಸವು ಲಿಡಾಳ ಮನೆಯನ್ನು ಹೊಕ್ಕಿ ಅಡಗಿಕೊಳ್ಳುತ್ತದೆ. ಲಿಡಾ ಸುಂದರ ಹಂಸವನ್ನು ಕಂಡು ನೇವರಿಸಿ ಮುದ್ದಿಸುತ್ತಾಳೆ. ಹಂಸದೊಳಗಿನ ಜ್ಯೂಸನಿಗೂ ಲಿಡಾಳ ಮೇಲೆ ಮೋಹವುಂಟಾಗುತ್ತದೆಹಂಸವು ಅವಳೊಂದಿಗೆ ಮಿಲನವಾಗಿ ಬರುವ ಮೊಟ್ಟೆಯೊಂದರಿಂದ ಹೆಲೆನಳ ಜನನವಾಗುತ್ತದೆ. ಹೀಗೆ ದೇವತೆಗಳ ರಾಜ ಜ್ಯೂಸ್ ಮತ್ತು ಲಿಡಾರ ಸಂಗಮದಿಂದ ಜನಿಸಿದ ಹೆಲೆನ್ ಜಗತ್ತಿನ ಅಪ್ರತಿಮ ಸುಂದರಿಯಾಗಿ ಬೆಳೆಯುತ್ತಾಳೆಹೆಲೆನೆಳ ಸಾಕು ತಂದೆ ಟಿಂಡೇರಿಯಸ್ ಹೆಲೆನಳ ಅಪ್ರತಿಮ ಸೌಂದರ್ಯವು ಒಂದು ದಿನ ತನ್ನ ಕುಟುಂಬಕ್ಕೆ, ರಾಜ್ಯಕ್ಕೆ ಮಾರಕವಾಗುವುದು ಎಂದು ಚಿಂತಿತನಾಗಿರುತ್ತಾನೆ. ಆಕೆಯನ್ನು ವರಿಸಲು ಎಷ್ಟೋ ರಾಜಕುಮಾರರು ಕಾತುರಾಗಿ ಇದ್ದುದೇ ಅವನ ಚಿಂತೆಗೆ ಕಾರಣವಾಗಿತ್ತು. ವರಿಸಲಾಗದ ರಾಜಕುಮಾರರ ಆಕ್ರೋಶಕ್ಕೆ ತಾನು, ತನ್ನ ರಾಜ್ಯ ಗುರಿಯಾಗುವುದೆಂಬ ಆತಂಕ ಅವನಲ್ಲಿತ್ತು. ಮಧ್ಯೆ ಒಡೀಸಿಯಸ್ ಎಂಬ ಮತ್ತೋರ್ವ ಗ್ರೀಕ್ ವೀರ ಟಿಂಡೇರಿಯಸ್ ಸಹಾಯಕ್ಕೆ ಬರುತ್ತಾನೆ. ಹೆಲೆನಳ ಮದುವೆಯನ್ನು ಯಾವುದೇ ಕಲಹವಿಲ್ಲದೆ ನೆರವೇರಿಸುವ ಉಪಾಯವನ್ನು ಹೇಳಿಕೊಡುತ್ತಾನೆ. ಟಿಂಡೇರಿಯಸ್ ಹೆಲೆನಳ ಸ್ವಯಂವರವನ್ನು ಏರ್ಪಡಿಸುತ್ತಾನೆ. ಇಥಾಕಾದ ರಾಜಕುಮಾರನಾದ ಒಡೀಸಿಯಸ್ ನನ್ನು ಒಳಗೊಂಡು ಸುಮಾರು 36 ರಾಜರು, ರಾಜಕುಮಾರರು ತಮ್ಮ ರಾಜ್ಯದ ಪ್ರತಿಷ್ಠೆಗೆ ಅನುಗುಣವಾಗಿ ಭಾರಿ ಉಡುಗೊರೆಗಳೊಂದಿಗೆ ಸ್ವಯಂವರಕ್ಕೆ ಆಗಮಿಸುತ್ತಾರೆ. ಯಾವುದೇ ಉಡುಗೊರೆಯನ್ನು ತರದ ಒಡೀಸಿಯಸ್ ಗೆ ಸ್ವಯಂವರದಲ್ಲಿ ತಾನು ಸಫಲನಾಗುವುದು ಅಸಾಧ್ಯವೆಂದು ಮನವರಿಕೆಯಾಗುತ್ತದೆ. ಹೆಲೆನಳ ಬದಲಿಗೆ ಬದಲಿಗೆ ಪೆನೆಲೋಪ್ ಎಂಬ ರಾಜಕುಮಾರಿಯನ್ನು ವರಿಸುವ ಯೋಚನೆ ಅವನ ತಲೆಯಲ್ಲಿ ಸುಳಿದು ಅದಕ್ಕೆ ಟಿಂಡೇರಿಯಸ್ ಸಹಾಯ ಕೇಳುತ್ತಾನೆಹೆಲೆನಳ ಸ್ವಯಂವರ ಯಾವುದೇ ಕಲಹವಿಲ್ಲದೆ ನಡೆಸುವ ಉಪಾಯವನ್ನು ಹೇಳಿಕೊಡುವುದರ ಬದಲಿಗೆ ಟಿಂಡೇರಿಯಸ್ ಸಹೋದರ ಇಕರಸ್ ಮಗಳಾದ ಪೆನೆಲೋಪ್ ಳೊಂದಿಗೆ ತನ್ನ ಮದುವೆಯನ್ನು ಮಾಡಿಸಬೇಕೆಂಬ ಒಪ್ಪಂದವನ್ನು ಟಿಂಡೇರಿಯಸ್ ನೊಂದಿಗೆ ಮಾಡಿಕೊಳ್ಳುತ್ತಾನೆ. ಒಡೀಸಿಯಸ್ ಉಪಾಯದಂತೆ ಟಿಂಡೇರಿಯಸ್ ಸ್ವಯಂವರಕ್ಕೆ ಬಂದ ಎಲ್ಲ ರಾಜ, ರಾಜಕುಮಾರರಿಗೆ ಒಂದು ಶರತ್ತು ವಿಧಿಸುತ್ತಾನೆಸ್ವಯವರದಲ್ಲಿ ಆಯ್ಕೆಯಾಗುವ ವರನೊಡನೆ ನಡೆಯುವ ಹೆಲೆನಳ ಮದುವೆಯನ್ನು ಭಾಗವಹಿಸಿರುವ ಎಲ್ಲ ರಾಜರು, ರಾಜಕುಮಾರರು ಸರ್ವ ಸಮ್ಮತವಾಗಿ ಒಪ್ಪಿ. ಮದುವೆಗೆ ಸಂಬಂಧಿಸಿದಂತೆ ಮುಂದೆ ಉಂಟಾಗುವ ಯಾವುದೇ  ಕಲಹವನ್ನು ಬಗೆಹರಿಸಲು ಎಲ್ಲರು ಸಹಕರಿಸಬೇಕು ಎಂದು ಟಿಂಡೇರಿಯಸ್ ಹೇಳುತ್ತಾನೆ; ಅದಕ್ಕೆ ಒಪ್ಪಿದ ರಾಜ ಕುಮಾರರು, ಆಯ್ಕೆಯನ್ನು ಕಂತೆಕಟ್ಟಿದ ಕಡ್ಡಿಗಳನ್ನು ಇರಿಯುದರ ಮೂಲಕ ನಡೆಯಬೇಕೆಮದು ಆಗ್ರಹಿಸುತ್ತಾರೆ. ಕಡ್ಡಿಗಳನ್ನು ಇರಿಯುವುದೆಂದರೆ, ಒಂದೇ ಅಳತೆಯ ಕಡ್ಡಿಗಳನ್ನು ತೆಗೆದುಕೊಂಡು ಅದರೊಳಗೆ ಒಂದು ಗಿಡ್ಡ ಕಡ್ಡಿಯನ್ನಿಟ್ಟು ಕಂತೆ ಕಟ್ಟಿ, ಕಂತೆಯ ಒಂದು ಕೊನೆಯನ್ನು ಸ್ಪರ್ಧೆನಡೆಸುವವರು ಹಿಡಿದು,  ಇನ್ನೊಂದು ಕೊನೆಯನ್ನು ಎಲ್ಲ ಕಡ್ಡಿಗಳು ಒಂದೇ ಸಮನಾಗಿ ಕಾಣುವಂತೆ ಸ್ಪರ್ಧಿಗಳ ಮುಂದೆ ಹಿಡಿಯಬೇಕು. ಕಂತೆಯೊಳಗಿನ ಕಡ್ಡಿಗಳನ್ನು ಒಬ್ಬೊಬ್ಬ ಸ್ಪರ್ಧಿಯು ಒಂದೊಂದರಂತೆ ಇರಿಯುತ್ತಾ ಹೋದಂತೆ, ಯಾವ ಸ್ಪರ್ಧಿಗೆ ಅದರೊಳಗಿರುವ  ಗಿಡ್ಡ ಕಡ್ಡಿಯು ದೊರೆಯುವುದೋ ಅವನು ಆಯ್ಕೆಯಾದಂತೆ. ಸ್ವಯಂವರದಲ್ಲಿ ಮೈಸಿನಾಯೆ ರಾಜ್ಯದ ರಾಜಕುಮಾರ ಮೆನೆಲೇಯಸ್  ಎಂಬುವವನು ಆಯ್ಕೆಯಾಗುತ್ತಾನೆ.  ಹೆಲೆನಳ ಮದುವೆಯನ್ನು ಮೆನೆಲೇಯಸ್ ನೊಂದಿಗೆ ನಡೆಯುತ್ತದೆ. ಮುಂದೆ ಟಿಂಡೇರಿಯಸ್ ಸ್ಪಾರ್ಟಾ ರಾಜ್ಯದ ಸಿಂಹಾಸನ ವನ್ನು ಮೆನೆಲೇಯಸ್ ಮತ್ತು ಹೆಲೆನ್ ರಿಗೆ ವಹಿಸಿ ನಿವೃತ್ತಿಯಾಗುತ್ತಾನೆ.
ಹೆಲೆನಳನ್ನು ಪ್ಯಾರಿಸನು ಸ್ಪಾರ್ಟಾದ ಅರಮನೆಯಿಂದು ಹೊತ್ತೊಯ್ಯುತ್ತಿರುವುದು
ಇತ್ತ, ಕಾಮ ದೇವತೆ ಅಫ್ರೊಡೈಟ್ ಳಿಂದ ಹೆಲೆನಳ ಪ್ರೇಮವನ್ನು ವರವಾಗಿ ಪಡೆದ ಪ್ಯಾರಿಸನು ಈ ವೃತ್ತಾಂತವನ್ನು ಮರೆತು, ಟ್ರಾಯ್ ದೇಶದ ರಾಯಭಾರಿಯಾಗಿ ಸ್ಪಾರ್ಟಾಕ್ಕೆ ಬರುತ್ತಾನೆ; ಅಲ್ಲಿನ ರಾಜ ಮೆನಿಲೇಯಸ್ನ ಅರಮನೆಯಲ್ಲಿ ಆಥಿತಿಯಾಗಿ ಉಳಿದಾಗ ಹೆಲೆನನಳನ್ನು ಕಾಣುತ್ತಾನೆ. ಇಬ್ಬರಿಗೂ ಪರಸ್ಪರ ಪ್ರೇಮಾಂಕುರವಾಗುತ್ತದೆ. ಈ ನಡುವೆ ಮೆನೆಲೇಯಸ್ ತನ್ನ ಚಿಕ್ಕಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪರ ಊರಿಗೆ ಹೋಗುತ್ತಾನೆ. ಅಷ್ಟೊತ್ತಿಗೆ ಗಾಢ ಪ್ರೇಮದಲ್ಲಿದ್ದ ಹೆಲೆನ್ ಮತ್ತು ಪ್ಯಾರಿಸ್ ಸ್ಪಾರ್ಟಾ ದೇಶವನ್ನು ಬಿಟ್ಟು ಟ್ರಾಯ್ ದೇಶಕ್ಕೆ ಪರಾರಿಯಾಗುತ್ತಾರೆ. ತನ್ನ ಅರಮನೆಗೆ ಹಿಂತಿರುಗಿದ ಮೆನೆಲೇಯಸ್  ತನ್ನ ಹೆಂಡತಿಯನ್ನು ಪ್ಯಾರಿಸ್ ಹೊತ್ತೊಯ್ದಿದ್ದಾನೆ ಎಂದು ಎಣಿಸಿ ತನ್ನ ಸಹೋದರ ಅಗಮೆಮ್ನಾನ್ ಜೊತೆಗೂಡಿ ಅವಳನ್ನು ಟ್ರಾಯ್ ದೇಶದಿಂದ ಬಿಡಿಸಿಕೊಂಡು ಬರಲು ಸಹಾಯ ಮಾಡುವಂತೆ ತನ್ನ ಮಿತ್ರ ರಾಜರುಗಳೊಂದಿಗೆ, ಹಿಂದೆ ಹೆಲೆನಳ ಸ್ವಯಂವರದಲ್ಲಿ ಭಾಗವಹಿಸಿದ್ದ ರಾಜಕುಮಾರರನ್ನು ಅಂದಿನ ಒಪ್ಪಂದದಂತೆ ತನ್ನ-ಹೆಲೆನಳ ಮದುವೆಯನ್ನು ಕಾಪಾಡಲು, ಅವಳನ್ನು ಮತ್ತೆ ಸ್ಪಾರ್ಟಾಗೆ ಕರೆತರಲು, ಟ್ರೋಜನ್ನರ ವಿರುದ್ಧ ನಡೆಯುವ ಯುದ್ಧದಲ್ಲಿ ಸಹಾಯ ಮಾಡಬೇಕೆಂದು ಒತ್ತಾಯಿಸುತ್ತಾನೆ.  ಅವರು ಮೊದಲು ಹಿಂದೇಟು ಹಾಕಿದರೂ, ಇಚ್ಚೆಯಿಲ್ಲದೆ ಕರಾರಿನಂತೆ ಸಹಾಯಕ್ಕೆ ಮುಂದಾಗುತ್ತಾರೆ.   ಹಿಂದೆ ಸ್ವಯಂವರದ ಸ್ಪರ್ಧಿಗಳಲ್ಲಿ ಒಬ್ಬನಾಗಿದ್ದ ಒಡೀಸಿಯಸ್ ಈ ಯುದ್ಧದಿಂದ ತಪ್ಪಿಸಿಕೊಳ್ಳುವ ಹಂಚಿಕೆಯಲ್ಲಿರುತ್ತಾನೆ; ಏಕೆಂದರೆ, ತಾನು ಈ ಯದ್ಧಕ್ಕೆ ಹೋದರೆ ಮನೆಗೆ ಹಿಂದಿರುಗುವುದಕ್ಕೆ ತುಂಬಾ ವರ್ಷಗಳು ಹಿಡಿಯುತ್ತದೆ ಎಂದು  ದೇವರ ಆವಾಹನೆಯಲ್ಲಿ (ಆರಕಲ್)  ಅವನಿಗೆ ತಿಳಿಯುತ್ತದೆ. ಈ ಯುದ್ಧವನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಯೋಚಿಸುತ್ತಿರುವಾಗ, ಒಡೀಸಿಯಸ್ ನನ್ನು ಈ ಯದ್ಧಕ್ಕೆ ಕರೆತರುವಂತೆ ಅಗಮೆಮ್ನಾನ್ ನೌಪ್ಲಿಯಾ ದೇಶದ ರಾಜಕುಮಾರನಾದ ಪೆಲಮೆಡಿಸ್ ನನ್ನು ಇಥಾಕಾ ದೇಶಕ್ಕೆ ಕಳುಹಿಸುತ್ತಾನೆ. ಪೆಲಮೆಡಿಸ್ ನನ್ನು ಕಂಡ ಒಡೀಸಿಯಸ್  ತನಗೆ ಮತಿ ಭ್ರಮಣೆಯಾಗಿದೆ ಎಂದು ತೋರಿಸಿಕೊಳ್ಳುವ ನಾಟಕವಾಡುತ್ತಾನೆ;  ಸಮವಾಗಿ ನಡೆಯಲಾಗದಂತೆ, ಒಂದು ಕತ್ತೆ ಮತ್ತು ಎತ್ತನ್ನು ನೇಗಿಲ ನೊಗಕ್ಕೆ ಕಟ್ಟಿ, ಹೊಲವೊಂದರಲ್ಲಿ ಉಪ್ಪನ್ನು ಬಿತ್ತುತ್ತಾ ತನಗೆ ಮತಿ ಭ್ರಮಣೆಯಾಗಿದೆ ಎಂದು ತೋರ್ಪಡಿಸುತ್ತಾನೆ. ಇವನಿಗೆ ನಿಜವಾಗಿ ಮತಿಭ್ರಮಣೆಯಾಗಿದೆಯೋ ಇಲ್ಲವೊ ಎಂದು ಪರೀಕ್ಷಿಸಲು ಪೆಲಮೆಡಿಸ್ ಒಡೀಸಿಯಸ್ ನ ಎಳೆಯ ಮಗನನ್ನು ಹರಿಯುವ ನೇಗಿಲಿನ ಕುಳಕ್ಕೆ ಅಡಡ್ಡಲಾಗಿ ಮಲಗಿಸುತ್ತಾನೆ; ಆಗ ಒಡೀಸಿಯಸ್ ನೇಗಿಲನ್ನು ಪಕ್ಕಕ್ಕೆ ಸರಿಯುವಂತೆ ಮಾಡಿ ಮಗನನ್ನು ಉಳಿಸಿ, ತನಗೆ ಮತಿಭ್ರಮಣೆ ಯಾಗಿಲ್ಲವೆಂದು ತಾನೇ ಒಪ್ಪಿಕೊಳ್ಳುತ್ತಾನೆ.  ತನ್ನನ್ನು ಹೀಗೆ ಪೇಚಿಗೆ ಸಿಲುಕಿಸಿದ ಪೆಲಮೆಡಿಸನನ್ನು ಮುಂದೆ  ಯುದ್ಧ ದ್ರೋಹದಲ್ಲಿ ಸಿಲುಕುವಂತೆ ಮಾಡಿ ಒಡೀಸಿಯಸ್ ಅವನ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಯುದ್ಧ ದ್ರೋಹದ ಆಪಾದನೆಯಲ್ಲಿ ಸಿಲುಕಿದ ಪೆಲಮೆಡಿಸ್ ಗ್ರೀಕರಿಂದಲೇ ಕಲ್ಲು ಹೊಡೆಸಿಕೊಂಡು ಸಾಯುತ್ತಾನೆ.  
ಅಖಿಲಿಸ್ ನನ್ನು ಅವನ ತಾಯಿ ಥೀಟಿಸ್ ಸ್ಟಿಕ್ಸ್ ನದಿಯಲ್ಲಿ ಅದ್ದಿ ತೆಗೆಯುತ್ತಿರುವುದು
ಇತ್ತ ಹೆಲೆನಳ ಸ್ವಯಂವರದಲ್ಲಿ ಆದ ಕರಾರಿನಂತೆ ಎಲ್ಲ ರಾಜರುಗಳು ತಮ್ಮ ತಮ್ಮ ಸೈನ್ಯದೊಂದಿಗೆ ಬಂದು ಓಲಿಸ್ ಎಂಬಲ್ಲಿ ಸೇರುತ್ತಾರೆ. ಟ್ರೋಜನ್ ಯದ್ಧದ ಮಹಾವೀರನಾದ ಅಖಿಲಿಸ್  ಕೊನೆಯಲ್ಲಿ ಬಂದು ತನ್ನ ಸೈನ್ಯದೊಂದಿಗೆ ಸೇರುತ್ತಾನೆ. ಇದಕ್ಕೂ ಮುನ್ನ ಈ ಅಖಿಲಿಸ್ ನ ಜನ್ಮ ವೃತ್ತಾಂತವನ್ನು ಹೇಳಬೇಕು. ಈತ ಥೀಟಿಸ್ ಮತ್ತು ಪೆಲಿಯಸ್ ಎಂಬುವವರ ಪುತ್ರ. ಈ ಮೊದಲು ಹೇಳಿದಂತೆ, ಈ ದಂಪತಿಗಳ ಮದುವೆಗೆಂದೇ ದೇವತೆಗಳ ರಾಜನಾದ ಜ್ಯೂಸನು ಏರ್ಪಡಿಸಿದ ಮಹಾ ಔತಣಕೂಟದಲ್ಲಿಯೇ ಚಿನ್ನದ ಸೇಬಿನ ವೃತ್ತಾಂತ ನಡೆದದ್ದು. ಅಖಿಲಿಸ್ ಹುಟ್ಟಿದಾಗ ಆತನ ತಾಯಿ ಥೀಟಿಸ್ ಅವನಿಗೆ ಮುಂದೆ ಯುದ್ಧದಲ್ಲಿ ಯಾವುದೇ ಅಸ್ತ್ರದಿಂದ ಅವನಿಗೆ ಹಾನಿಯಾಗದಂತೆ ದೇಹದಲ್ಲಿ ಕವಚ ರಚನೆಯಾಗಲಿ ಎಂದು ಅವನನ್ನು  ಸ್ಟಿಕ್ಸ್ ನದಿಯಲ್ಲಿ ಅದ್ದಿತೆಗೆಯುತ್ತಾಳೆ. ಹೀಗೆ ಒಂದು ಕಾಲನ್ನು ಹಿಡಿದು ಇಡೀ ದೇಹವನ್ನು ಅದ್ದಿ ತೆಗೆಯುವಾಗ ತನ್ನ ಕೈಯಲ್ಲಿ ಹಿಡಿದಿದ್ದ ಕಾಲಿನ ಮೊಣಕಾಲಿನ ಭಾಗ ನೀರಿನಲ್ಲಿ ಮುಳುಗದೆ ಉಳಿಯಿತು; ಈ ಮೊಣಕಾಲಿನ ಭಾಗದಲ್ಲಿ ಕವಚ ರಚನೆಯಾಗದೆ ಅದು ಅವನ ಅರಕ್ಷಿತ ಭಾಗವಾಗಿ ಉಳಿಯುತ್ತದೆ. ಅಖಿಲಿಸ್ ಬೆಳೆದು ದೊಡ್ಡವನಾದ ಮೇಲೆ ಸೆಂಟಾರ್ ಎಂಬ ಅರ್ಧಮಾನವ ಅರ್ಧ ಕುದುರೆಯ ದೇಹವಿರುವ ವೀರನಿಂದ ಅವನಿಗೆ ಯದ್ಧ ತರಬೇತಿಯಾಗುತ್ತದೆ. ಹೀಗೆ ಸೆಂಟಾರ್ ನಿಂದ ತರಬೇತಿ ಪಡೆದ ಅಖಿಲಿಸ್ ಅಪ್ರತಿಮ ವೀರನಾಗುತ್ತಾನೆ.
ಸೆಂಟಾರ್ ನಿಂದ ತರಬೆತಿ ಪಡೆಯುತ್ತಿರುವ ಅಖಿಲಿಸ್
ಹೀಗೆ ಒಂದೆಡೆ ಓಲಿಸ್ ನಲ್ಲಿ ಜಮಾಯಿಸಿದ್ದ ಸುಮಾರು ಒಂದು ಸಾವಿರ ಯದ್ಧ ಹಡಗುಗಳು ಇಂದಿನ ಮೆಡಿಟರೇನಿಯನ್ ಸಮುದ್ರದಲ್ಲಿ  ಟ್ರಾಯ್ ನತ್ತ  ಹೊರಡುತ್ತವೆ.  ಸಮುದ್ರದಲ್ಲಿ ಎದ್ದ ಬಿರುಗಾಳಿಯಿಂದ ಹಡಗುಗಳು ಒಂದೊಂದಾಗಿ ದಿಕ್ಕು ತಪ್ಪಿ ಎಲ್ಲೆಲ್ಲೋ ಹೋಗಿ ತಲುಪುತ್ತವೆ. ಹೀಗೆ ಅಖಿಲಿಸ್ ನ ಹಡಗು ಬಂದು ಸ್ಕೈರೋಸ್ ಎಂಬಲ್ಲಿಗೆ ಸೇರುತ್ತದೆ. ಆಗ ಅವನ ತಾಯಿ ಥೀಟಿಸ್ ತನ್ನ ಮಗನನ್ನು ಈ ಯುದ್ದದಿಂದ ಹೇಗಾದರೂ ರಕ್ಷಿಸಬೇಕೆಂದು ಅವನ್ನು ಹೆಣ್ಣುಮಕ್ಕಳ ವೇಷದಲ್ಲಿ ಹೆಣ್ಣುಮಕ್ಕಳೊಂದಿಗೆ ಇರುವಂತೆ ಮಾಡುತ್ತಾಳೆ. ಅಲ್ಲಿ  ಡೀಡೇಮಿಯಾ ಎಂಬ ಸುಂದರ ಹೆಣ್ಣಿನ ಪ್ರೇಮದಲ್ಲಿ ಬಿದ್ದು ಅವಳನ್ನು ಮದುವೆಯಾಗುತ್ತಾನೆ. ಅವರಿಗೆ ನಿಯೋಟಾಲೆಮಾಸ್ ಎಂಬ ಪುತ್ರನ ಜನ್ಮವಾಗುತ್ತದೆ. ಇತ್ತ ಗ್ರೀಕ್ ಸೈನ್ಯದ ಪುನರ್ಜಮಾವಣೆಯಲ್ಲಿ ನಿರತನಾದ ಅಗಮೆಮ್ನಾನ್ ಅಖಿಲಿಸ್ ನನ್ನು ಹುಡುಕಿ ಕರೆತರುವಂತೆ ಒಡೀಸಿಯಸ್ ನನ್ನು ಕಳುಹಿಸುತ್ತಾನೆ.  ಅಖಿಲಿಸ್ ನನ್ನು ಹುಡುಕಿಕೊಂಡು ಸ್ಕೈರೋಸ್ ಗೆ ಬಂದ ಒಡೀಸಿಯಸ್ ಅವನ ಸುಳಿವು ಸಿಗದೆ ಇರುವಾಗ ಹೆಣ್ಣುಮಕ್ಕಳ ಗುಂಪಿನಲ್ಲಿ ಪುರುಷನಂತಿರುವವನನ್ನು ಕಂಡು ಅವನು ಸ್ತ್ರೀ ವೇಷದ ಅಖಿಲಿಸ್ ಇರಬಹುದೆಂಬ ಅನುಮಾನ ಬರುತ್ತದೆ.

No comments:

Post a Comment